ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇಲೆ ಧಾರವಾಡ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ, ಡಿವೈಎಸ್ಪಿ ಬಸವರಾಜ್ ಬುದ್ನಿ ಸೇರಿದಂತೆ 5 ಜನ ಅಧಿಕಾರಿಗಳ ತಂಡ ಹೆಸ್ಕಾಂ ಅಧಿಕಾರಿಯ ಮನೆ ಮತ್ತು ಆಪೀಸ ಸಹಿತ 4 ಕಡೆ ದಾಳಿ ನಡೆಸಿದ್ದು ಇನ್ನು
1. ಹುಬ್ಬಳ್ಳಿಯ ಅಕ್ಷಯ ಕಾಲೋನಿ / ಅಕ್ಷಯ ಪಾರ್ಕ್ ನಲ್ಲಿರುವ ನಿವಾಸ
2. ತಬೀಬ್ ಲ್ಯಾಂಡ್ ನಲ್ಲಿರುವ ಕಿರಣ್ ಕುಮಾರ್ ಅವರ ಹೆಸ್ಕಾಂ ಕಚೇರಿ
3. ಗೋಪನಕೊಪ್ಪದಲ್ಲಿರುವ ಅವರ ಪತ್ನಿ ಕೆಲಸ ಮಾಡುವ ಹೆಸ್ಕಾಂ ಕಚೇರಿ
4. ಧಾರವಾಡದಲ್ಲಿರುವ ಅವರ ಸಹೋದರನ ಮನೆ
ಕಿರಣ್ ಕುಮಾರ್ ಅವರ ಪತ್ನಿ ಪ್ರೀತಿ ಕೂಡ ಹೆಸ್ಕಾಂನಲ್ಲಿಯೇ ಇಂಜಿನಿಯರ್ ಆಗಿದ್ದಾರೆ.
ದಾಳಿ ವೇಳೆ ಅಕ್ಷಯ ಕಾಲೋನಿ ಮನೆಯಲ್ಲಿ ಅಪಾರ ಪ್ರಮಾಣದ ನಗದು, ಚಿನ್ನ, ಬೆಳ್ಳಿ ಪತ್ತೆಯಾಗಿದೆ ಎಂದು ವರದಿಯಾಗಿದೆ. ಚಿನ್ನದ ತೂಕ ಮಾಡಲು ಲೋಕಾಯುಕ್ತ ಅಧಿಕಾರಿಗಳು ಗೋಲ್ಡ್ ಸ್ಮಿತ್ ಅವರನ್ನು ಕರೆಸಿದ್ದಾರೆ.
ಇದು ಒಂದೇ ದಿನ ರಾಜ್ಯದ 8 ಅಧಿಕಾರಿಗಳ ಮೇಲೆ ನಡೆದ ದಾಳಿಯ ಭಾಗ. ಹುಬ್ಬಳ್ಳಿ ಜೊತೆಗೆ ಕಲಬುರಗಿಯಲ್ಲಿ ಜೆಸ್ಕಾಂ ಎಇಇ ರಾಜೇಶ್ವರಿ, ಚಿಕ್ಕಬಳ್ಳಾಪುರದ ಎಫ್ಡಿಎ ದರ್ಶನ್ ಗೌಡ, ಬೀದರ್ ನ ಕೃಷಿ ಅಧಿಕಾರಿ, ಮಂಡ್ಯದ ಹಾಸ್ಟೆಲ್ ಅಧೀಕ್ಷಕ ಸೇರಿದಂತೆ ಒಟ್ಟು 8 ಕಡೆ ಲೋಕಾಯುಕ್ತ ದಾಳಿ ನಡೆಸಿದೆ.