ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ನಡೆದ ರೈತರ ಬೃಹತ್ ಪ್ರತಿಭಟನೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ರೈತ ಮುಖಂಡರೊಬ್ಬರು ನೇರ ವಾಗ್ದಾಳಿ ನಡೆಸಿದ್ದಾರೆ.
"ಕನ್ನಡ ಓದಾಕ ಬರೋದಿಲ್ಲ, ನಿನ್ನ ಯಾವ ಮಿನಿಸ್ಟರ್ ಮಾಡೋದು? ಯಾಕೆ ನರೇಂದ್ರ ಮೋದಿ ಹೆಸರು ಕೆಡಿಸ್ತೀ ರಾಜ್ಯದಲ್ಲಿ" ಎಂದು ಏಕವಚನದಲ್ಲೇ ಪ್ರಶ್ನಿಸಿದ್ದಾರೆ. "ನಿನಗೆ ಹಿಂದೊಂದು ಮುಂದೊಂದು ಪೊಲೀಸ್ ಗಾಡಿ, ಸೆಕ್ಯೂರಿಟಿ ಇದೆ. ತಾಕತ್ತಿದ್ರೆ ಬಾ ಇಲ್ಲಿ" ಎಂದು ಸವಾಲು ಹಾಕಿದ್ದಾರೆ.
31 ಜಿಲ್ಲೆಗಳಲ್ಲಿ ಬಿಜೆಪಿಯವರು ಪಕ್ಷಾತೀತವಾಗಿ ಪ್ರಹ್ಲಾದ್ ಜೋಶಿ ಉಚ್ಚಾಟನೆಗೆ ಆಗ್ರಹಿಸಬೇಕು, ಇಂತಹ ಲುಚ್ಚ ರಾಜಕಾರಣಿ ಇರುವವರೆಗೂ ಬಿಜೆಪಿ ಉದ್ಧಾರ ಆಗಲ್ಲ ಎಂದು ಗುಡುಗಿದ್ದಾರೆ. ಈ ವೇಳೆ ಸಾವಿರಾರು ರೈತರು ಘೋಷಣೆ ಕೂಗಿ ಬೆಂಬಲ ಸೂಚಿಸಿದರು.