Home / ಜಿಲ್ಲೆ / ರಾತ್ರೋರಾತ್ರಿ ಸಿದ್ದರಾಮಯ್ಯ ಪ್ರತಿಮೆ ಸ್ಥಾಪನೆ...

ರಾತ್ರೋರಾತ್ರಿ ಸಿದ್ದರಾಮಯ್ಯ ಪ್ರತಿಮೆ ಸ್ಥಾಪನೆ . ಬೆಳಗಾಗುವ ಮುನ್ನವೇ ಪಾಲಿಕೆಯಿಂದ ತೆರವು ವಿವಾದದಲ್ಲಿ ಸಿದ್ದರಾಮಯ್ಯ ಪುತ್ಥಳಿ...

E
By ETV 24X7 Chief Admin
September 17, 2026 375 views 0 comments Edit Article
ರಾತ್ರೋರಾತ್ರಿ ಸಿದ್ದರಾಮಯ್ಯ ಪ್ರತಿಮೆ ಸ್ಥಾಪನೆ . ಬೆಳಗಾಗುವ ಮುನ್ನವೇ ಪಾಲಿಕೆಯಿಂದ ತೆರವು ವಿವಾದದಲ್ಲಿ  ಸಿದ್ದರಾಮಯ್ಯ ಪುತ್ಥಳಿ...

ನಗರದ ಹೈಕೋರ್ಟ್ ಕ್ರಾಸ್ ವೃತ್ತದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ 9 ಅಡಿ ಎತ್ತರದ ಪ್ರತಿಮೆಯನ್ನು ಅಭಿಮಾನಿಗಳ ಗುಂಪು ರಾತ್ರೋರಾತ್ರಿ ಯಾವುದೇ ಪೂರ್ವಾನುಮತಿ ಇಲ್ಲದೆ ಪ್ರತಿಷ್ಠಾಪಿಸಿತ್ತು.

ಇನ್ನು ವಿಷಯ ತಿಳಿಯುತ್ತಿದ್ದಂತೆ ಮಹಾನಗರ ಪಾಲಿಕೆ ಅಧಿಕಾರಿಗಳು ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ತೆರವುಗೊಳಿಸಿದ್ದಾರೆ. ಜನರು ನೋಡುವ ಮುನ್ನವೇ ಪಾಲಿಕೆ ಸಿಬ್ಬಂದಿ ಪ್ರತಿಮೆಯ ಮುಖವನ್ನು ಬಟ್ಟೆಯಿಂದ ಮುಚ್ಚಿ, ಸುರಕ್ಷಿತ ಜಾಗಕ್ಕೆ ರವಾನಿಸಿದ್ದಾರೆ ಇನ್ನು ಕಲ್ಯಾಣ ಕರ್ನಾಟಕ ಉತ್ಸವದ ಹಿನ್ನೆಲೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಅವರು ಕಲಬುರಗಿಯಲ್ಲಿ ವಾಸ್ತವ್ಯ ಹೂಡಿದ್ದರು, ಆದ್ರೆ ಅದೇ ಮಾರ್ಗದಲ್ಲಿ ಈ ಪ್ರತಿಮೆ ಇತ್ತು ಅನ್ನೋದು ಚರ್ಚೆಗೆ ಕಾರಣ ಆಗಿದೆ.

Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "ಕಲಬುರಗಿಯಲ್ಲಿ ರಾತ್ರೋರಾತ್ರಿ ಸಿದ್ದರಾಮಯ್ಯ ಪ್ರತಿಮೆ ಸ್ಥಾಪನೆ . ಬೆಳಗಾಗುವ ಮುನ್ನವೇ ಪಾಲಿಕೆಯಿಂದ ತೆರವು ವಿವಾದದಲ್ಲಿ  ಸಿದ್ದರಾಮಯ್ಯ ಪುತ್ಥಳಿ..."
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel

ಇನ್ನು ಇದೇ ಸ್ಥಳದಲ್ಲಿ 2-3 ವರ್ಷಗಳ ಹಿಂದೆಯೂ ಅನುಮತಿ ಇಲ್ಲದೆ ಸಿದ್ದರಾಮಯ್ಯ ಸರ್ಕಲ್ ಎಂದು ಬ್ಯಾನರ್ ಹಾಕಿ ನಾಮಕರಣ ಮಾಡಲು ಯತ್ನ ನಡೆದಿತ್ತು, ಈಗ ಮತ್ತೆ ಅದೇ ವಿವಾದ ಮರುಕಳಿಸಿದೆ ಅಂತ ಸಾರ್ವಜನಿಕರ ಮಧ್ಯ ಗುಸು ಗುಸು ಮಾತುಗಳು ಗಲ್ಲಿ ಗಲ್ಲಿಗಳಲ್ಲಿ ಕೇಳಿ ಬರುತ್ತಿವೆ.

TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.