Home / ಹುಬ್ಬಳ್ಳಿ-ಧಾರವಾಡ / ಸಾಲದ ಸುಳಿಗೆ ಸಿಲುಕಿ ತಾಯಿ ಸೇರಿ ನಾಲ್ವರು ವಿ*...

ಸಾಲದ ಸುಳಿಗೆ ಸಿಲುಕಿ ತಾಯಿ ಸೇರಿ ನಾಲ್ವರು ವಿ**ಷ ಸೇವನೆ- 8 ವರ್ಷದ ಬಾಲಕಿ ಸಾ***ವು!

E
By ETV 24X7 Chief Admin
October 24, 2026 369 views 0 comments Edit Article
ಸಾಲದ ಸುಳಿಗೆ ಸಿಲುಕಿ ತಾಯಿ ಸೇರಿ ನಾಲ್ವರು ವಿ**ಷ ಸೇವನೆ- 8 ವರ್ಷದ ಬಾಲಕಿ ಸಾ***ವು!

ಹುಬ್ಬಳ್ಳಿ: ಸಾಲಗಾರರ ಒತ್ತಡಕ್ಕೆ ಸಿಲುಕಿ ತಾಯಿ ತನ್ನ ಮೂವರು ಮಕ್ಕಳಿಗೆ ವಿಷ ನೀಡಿ, ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ 8 ವರ್ಷದ ಬಾಲಕಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ತಾಯಿ ಸವಿತಾ (42) ಸ್ಥಿತಿ ಚಿಂತಾಜನಕವಾಗಿದೆ. ಇನ್ನಿಬ್ಬರು ಮಕ್ಕಳು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "ಸಾಲದ ಸುಳಿಗೆ ಸಿಲುಕಿ ತಾಯಿ ಸೇರಿ ನಾಲ್ವರು ವಿ**ಷ ಸೇವನೆ- 8 ವರ್ಷದ ಬಾಲಕಿ ಸಾ***ವು!"
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel

ಮೃತ ಬಾಲಕಿಯನ್ನು ನಿವೇದಿತಾ ಅಲಿಯಾಸ್ ಗದಿಗೆವ್ವ (8) ಎಂದು ಗುರುತಿಸಲಾಗಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಮೃತಪಟ್ಟಿದ್ದಾಳೆ. ಹಾಗೂ ಮಕ್ಕಳಾದ ಭಾಗ್ಯಶ್ರೀ (6) ಮತ್ತು ಹರ್ಷಿತಾ (9) ಅವರ ಆರೋಗ್ಯ ಸ್ಥಿರವಾಗಿದ್ದು ಚಿಕಿತ್ಸೆ ಮುಂದುವರಿದಿದೆ.

YouTube Video Preview
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Video

ಪ್ರಾಥಮಿಕ ಮಾಹಿತಿಯ ಪ್ರಕಾರ, ಸವಿತಾ ವಿವಿಧ ಸಂಘಗಳಲ್ಲಿ ಸಾಲ ಮಾಡಿದ್ದರು ಎನ್ನಲಾಗಿದೆ. ಅಲ್ಲದೆ, ಮೂರು ಲಕ್ಷ ರೂಪಾಯಿಗೆ ಹೊಲವನ್ನು ಒತ್ತೆ ಇಟ್ಟಿದ್ದರೆ, ಖಾಸಗಿಯಾಗಿ ಇನ್ನೂ ಎರಡು ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಸಾಲಗಾರರ ಒತ್ತಡ ತಾಳಲಾರದೆ ಸವಿತಾ ಈ ಕೃತ್ಯಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಮೊದಲು ತನ್ನ ಮೂವರು ಮಕ್ಕಳಿಗೆ ವಿಷ ನೀಡಿದ ಬಳಿಕ ತಾನೂ ವಿಷ ಸೇವಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸಾಲದ ಸಂಕಷ್ಟದ ಹಿನ್ನೆಲೆಯಲ್ಲಿ ನಡೆದಿರುವುದಾಗಿ ಹೇಳಲಾಗುತ್ತಿರುವ ಈ ಘಟನೆ ಕರಡಿಗುಡ್ಡ ಗ್ರಾಮದಲ್ಲಿ ಆತಂಕ ಹಾಗೂ ಆಘಾತ ಮೂಡಿಸಿದೆ. ಘಟನೆಯ ಸಂಪೂರ್ಣ ವಿವರಗಳು ತನಿಖೆಯಿಂದ ತಿಳಿದು ಬರಬೇಕಿದೆ.

TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.