ಮುಂಬೈನಿಂದ ಬೆಂಗಳೂರು ಕಡೆಗೆ ಹೊರಟಿದ್ದ ಖಾಸಗಿ ಬಸ್ ಹುಬ್ಬಳ್ಳಿ ಬಳಿ ಅಪಘಾತಕ್ಕೀಡಾಗಿದೆ.
ಛಬ್ಬಿ ಕ್ರಾಸ್ ಬಳಿ ಬೆಳಗಿನ ಜಾವ 3 ಗಂಟೆಗೆ ಈ ದುರಂತ ಸಂಭವಿಸಿದೆ. MR Travels ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೊಲಕ್ಕೆ ನುಗ್ಗಿದೆ.
ಬಸ್ ನಲ್ಲಿ 26 ಜನ ಪ್ರಯಾಣಿಕರಿದ್ದರು.ಅಪಘಾತದ ರಭಸಕ್ಕೆ ಚಾಲಕನ ಕಾಲು ಸಿಲುಕಿ ನರಳಾಡುತ್ತಿದ್ದ. ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟು ಚಾಲಕನನ್ನು ಹೊರತೆಗೆದಿದ್ದಾರೆ.
ಈ ದುರಂತದಲ್ಲಿ 15 ಜನರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.