ಸೆ.12 ರ ರಾತ್ರಿ 9:30ರ ಸುಮಾರಿಗೆ ಮರಾಠ ಗಲ್ಲಿ ಯಿಂದ ಸಿಬಿಟಿ ಕಡೆಗೆ ಹೋಗುವ ರಸ್ತೆ ಬಳಿ ಮೇದಾರ್ ಓಣಿ ಗಣಪತಿ ಮತ್ತು ಕಲಾಲ್ ಓಣಿ ಗಣಪತಿ ಮೆರವಣಿಗೆಗಳು ಮುಖಾಮುಖಿಯಾದಾಗ ಈ ಗಲಾಟೆ ನಡೆದಿದೆ.
- ಕಲಾಲ್ ಓಣಿಯ ಗಣಪತಿ ಡಿಜೆ ಮುಂದೆ ಕೆಲವು ಯುವಕರು ಮೆರವಣಿಗೆಯಲ್ಲಿದ್ದ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ, ಇದನ್ನು ತಡೆಯಲು ಹೋದ ಸ್ಥಳೀಯರ ಜೊತೆ ಕಿಡಿಗೇಡಿಗಳು ಗಲಾಟೆ ಮಾಡಿದ್ದಾರೆ.ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ ತಕ್ಷಣ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು, ಪೊಲೀಸರು ಸ್ಥಳಕ್ಕೆ ಬಂದು ಲಘು ಲಾಠಿ ಚಾರ್ಜ್ ಮಾಡಿ ಪರಿಸ್ಥಿತಿ ನಿಯಂತ್ರಿಸಿದ್ದಾರ