ಹುಬ್ಬಳ್ಳಿಯ ಪ್ರಸಿದ್ಧ ಮುರುಸಾವಿರ ಮಠದಲ್ಲಿ ನವರಾತ್ರಿ ಪ್ರಯುಕ್ತ ಅದ್ದೂರಿ ದಾಂಡಿಯಾ ನೈಟ್ಸ್ ಆಯೋಜಿಸಲಾಗಿತ್ತು. ಶ್ರುತಿ ಜೈನ್ ಪ್ರೆಂಡ್ಸ ಗ್ರುಪ್ ಜೊತೆಗೆ ಈ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಭಾಗವಹಿಸಿ ಆಕರ್ಷಕ ನೃತ್ಯ ಪ್ರದರ್ಶನ ನೀಡಿದರು.
ಕೆಂಪು, ಹಳದಿ ಬಣ್ಣದ ಸಾಂಪ್ರದಾಯಿಕ ಉಡುಗೆ ತೊಟ್ಟು, ಡಿಜೆ ಸದ್ದಿಗೆ ತಕ್ಕಂತೆ ಹೆಜ್ಜೆ ಹಾಕಿದ ಮಹಿಳಾ ತಂಡದ ನೃತ್ಯ ನೋಡುಗರ ಮನ ಸೆಳೆಯಿತು. ರಾತ್ರಿ ಹೊತ್ತು ವಿದ್ಯುತ್ ದೀಪಗಳ ಅಲಂಕಾರ, ದಾಂಡಿಯಾ ಸ್ಟಿಕ್ ನೊಂದಿಗೆ ಮಹಿಳೆಯರ ಜೋಶ್ ನೋಡಲು ಸಾವಿರಾರು ಜನ ಸೇರಿದ್ದರು.
ಮುರುಸಾವಿರ ಮಠದ ಆವರಣದಲ್ಲಿ ನಡೆದ ಈ ನವರಾತ್ರಿ ದಾಂಡಿಯಾ ನೈಟ್ಸ್ ಹುಬ್ಬಳ್ಳಿಯ ಜನರಿಗೆ ನಿಜಕ್ಕೂ ಹಬ್ಬದ ಸಂಭ್ರಮ ತಂದಿದೆ.