Home / ಕ್ರೈಂ / ಹುಬ್ಬಳ್ಳಿಯಲ್ಲಿ 6 ಗಾಂಜಾ ಪೆಡ್ಲರ್ ಅರೆಸ್ಟ್!...

ಹುಬ್ಬಳ್ಳಿಯಲ್ಲಿ 6 ಗಾಂಜಾ ಪೆಡ್ಲರ್ ಅರೆಸ್ಟ್! 491 ಗ್ರಾಂ ಗಾಂಜಾ ವಶ ಪೊಲೀಸರ ಬಿಗ್ ಆಪರೇಷನ್!

E
By ETV 24X7 Chief Admin
November 2, 2026 212 views 0 comments Edit Article
ಹುಬ್ಬಳ್ಳಿಯಲ್ಲಿ 6 ಗಾಂಜಾ ಪೆಡ್ಲರ್ ಅರೆಸ್ಟ್! 491 ಗ್ರಾಂ ಗಾಂಜಾ ವಶ ಪೊಲೀಸರ ಬಿಗ್ ಆಪರೇಷನ್!

ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಮಾದಕ ವಸ್ತುಗಳ ಮಾರಾಟದ ವಿರುದ್ಧ ಪೊಲೀಸರು ಬಿಗ್ ಆಪರೇಷನ್ ನಡೆಸಿದ್ದಾರೆ. ಗಾಂಜಾ ಮಾರಾಟ ಮಾಡುತ್ತಿದ್ದ ಒಟ್ಟು 06 ಪೆಡ್ಲರ್‌ಗಳನ್ನು ಬಂಧಿಸಿ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.

Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "ಹುಬ್ಬಳ್ಳಿಯಲ್ಲಿ 6 ಗಾಂಜಾ ಪೆಡ್ಲರ್ ಅರೆಸ್ಟ್! 491 ಗ್ರಾಂ ಗಾಂಜಾ ವಶ ಪೊಲೀಸರ ಬಿಗ್ ಆಪರೇಷನ್!"
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel

ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಧಾರವಾಡ ಟೋಲ್ ನಾಕಾ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಸಿಸಿಬಿ ವಿಭಾಗದ ಪಿಐ ರಮೇಶ್ ಕಾಂಬಳೆ ತಂಡ ವಶಕ್ಕೆ ಪಡೆದಿದೆ. ಬಂಧಿತರನ್ನು ವಸೀಂ ಅಸ್ಲಂ ಶೇಖ್, 25 ವರ್ಷ ಮತ್ತು ಅಜೀಜ್ ಮಹಮದ್ ಗೌಸ್, 26 ವರ್ಷ, ಇಬ್ಬರೂ ಜನತ್ ನಗರ, ಧಾರವಾಡ ಎಂದು ಗುರುತಿಸಲಾಗಿದೆ. ಅವರಿಂದ 175 ಗ್ರಾಂ ಗಾಂಜಾ, ಎರಡು ಮೊಬೈಲ್ ಹಾಗೂ ₹3,010 ನಗದು ವಶಪಡಿಸಿಕೊಳ್ಳಲಾಗಿದೆ.

YouTube Video Preview
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Video

ಇತ್ತ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯ ಗುಡಿಹಾಳ ರಸ್ತೆ ಹತ್ತಿರ 4 ಜನರನ್ನು ಹಳೇಹುಬ್ಬಳ್ಳಿ ಠಾಣೆಯ ಪಿಐ ನೇತೃತ್ವದ ತಂಡ ಬಂಧಿಸಿದೆ. ಬಂಧಿತರನ್ನು ಮಹಮದ್ ಗೌಸ್ ಶಿಲೇದಾರ್, 24 ವರ್ಷ ವಿಶಾಲನಗರ, ಬಾಬಾಜಾನ್ ಯರಗಟ್ಟಿ, 27 ವರ್ಷ ನೇಕಾರನಗರ, ಜೇಮ್ಸ್ ಇಮಾನಿ, 21 ವರ್ಷ ಆನಂದನಗರ, ಮಹಮದ್ ಶೋಯೆಬ್ ಮುಲ್ಲಾ, 19 ವರ್ಷ ಶಿವಪುತ್ರನಗರ ಹಳೇಹುಬ್ಬಳ್ಳಿ ಎಂದು ಗುರುತಿಸಲಾಗಿದೆ. ಅವರಿಂದ 316 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದ್ದು, ಮತ್ತೊಬ್ಬ ಆರೋಪಿ ಅರ್ಮಾನ್ ತಲೆಮರೆಸಿಕೊಂಡಿದ್ದಾನೆ.

ಮಾದಕ ವಸ್ತುಗಳ ವಿರುದ್ಧ ನಿರಂತರ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.