ಹುಬ್ಬಳ್ಳಿಯಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ಮೂರು ಸಾವಿರ ಮಠದ ಹತ್ತಿರ ಆಯೋಜಿಸಿದ್ದ ಅದ್ದೂರಿ ದಾಂಡಿಯಾ ನೈಟ್ಸ್ ನಲ್ಲಿ ಅಭೂತಪೂರ್ವ ಸಂಭ್ರಮ ಕಂಡುಬಂತು!
ಈ ದಾಂಡಿಯಾ ನೈಟ್ಸ್ ನಲ್ಲಿ ಮಹಿಳೆಯರು, ಮಕ್ಕಳು, ಹಾಗೂ ವಯಸ್ಸಿನ ಹಿರಿಯರು ಎಂಬ ಭೇದವಿಲ್ಲದೆ ಎಲ್ಲರೂ ಒಟ್ಟಿಗೆ ಸೇರಿ ನೃತ್ಯ ಮಾಡುವ ಮೂಲಕ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದರು.
ಹಳದಿ ಸೀರೆ ತೊಟ್ಟ ಯುವತಿಯರಿಂದ ಹಿಡಿದು ಪುಟ್ಟ ಮಕ್ಕಳವರೆಗೆ, ಎಲ್ಲರೂ ಕೈಯಲ್ಲಿ ದಾಂಡಿಯಾ ಕೋಲು ಹಿಡಿದು ಸಾಂಪ್ರದಾಯಿಕ ಗರ್ಬಾ ಹಾಡಿಗೆ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದರು.
ಸ್ನೇಹಿತರ ಗುಂಪು, ಕುಟುಂಬ ಸಮೇತ ಆಗಮಿಸಿದ್ದ ಜನರು ಈ ದಾಂಡಿಯಾ ನೈಟ್ ನಲ್ಲಿ ಫುಲ್ ಎಂಜಾಯ್ ಮಾಡಿದರು. ಹುಬ್ಬಳ್ಳಿಯ ನವರಾತ್ರಿ ಸಂಭ್ರಮಕ್ಕೆ ಈ ದಾಂಡಿಯಾ ನೈಟ್ಸ್ ಮತ್ತಷ್ಟು ಮೆರುಗು ನೀಡಿತು.
*ಹೆಚ್ಚಿನ ಸುದ್ದಿಗೆ ನೋಡ್ತಾ ಇರಿ - ಈ ಟಿವಿ 24X7.*